Tel: +91 0836 2251055
14 APRIL 2024
ಇಂದು ಹುಬ್ಬಳ್ಳಿಯಲ್ಲಿ ನಡೆದ ಜಂಗಮ ಸಮಾಜದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿ, ದೇಶದ ಹಿತಕ್ಕಾಗಿ ಮತ್ತೊಮ್ಮೆ ಪ್ರಧಾನಮಂತ್ರಿ ಶ್ರೀ Narendra Modi ಅವರ ನೇತೃತ್ವದ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಕೋರಲಾಯಿತು.
ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಭಾರತ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಂಡಿರುವುದು ಕಳೆದ ಹತ್ತು ವರ್ಷಗಳ ಮೋದಿಯವರ ಆಡಳಿತದಲ್ಲಿ ಎಂಬುದನ್ನು ಮನಗಂಡಿರುವ ಪ್ರತಿಯೊಬ್ಬರೂ ರಾಷ್ಟ್ರದ ಹಿತಕ್ಕಾಗಿ ರಾಷ್ಟ್ರದ ಸರ್ವತೋಮುಖ ಪ್ರಗತಿಗಾಗಿ ಈ ಬಾರಿಯೂ ಬಿಜೆಪಿಯನ್ನು ಗೆಲ್ಲಿಸುವ ಭರವಸೆ ನೀಡಿದರು.
ಸಭೆಯಲ್ಲಿ ಸಮಾಜದ ಹಿರಿಯರಾದ ಶ್ರೀ ವೀರಭದ್ರಯ್ಯ ಸ್ವಾಮಿಗಳು ಪಂಚಗ್ರಹ ಹಿರೇಮಠ,ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಶಾಂತಾ ಹಿರೇಮಠ, ಬಸವರಾಜ್ ಚಿಕ್ಕಮಠ್, ಅಡವಯ್ಯ ಬೀಜಗತ್ತಿ ಮಠ, ನಾಗರಾಜ ಹಿರೇಮಠ, ಡಾ ಎಸ್.ಸಿ ಹಿರೇಮಠ, ಬಸಯ್ಯ ಹಡಗಲಿಮಠ, ಶಿವಯ್ಯ ಹಿರೇಮಠ, ಗುರಲಿಂಗಯ್ಯ ಕುರಡಿಕೇರಿಮಠ್, ಚೆನ್ನಯ್ಯ ಅಷ್ಟಗಿ ಮಠ ಹಾಗೂ ಪಕ್ಷದ ಪ್ರಮುಖರಾದ ಶ್ರೀ ಬಸವರಾಜ ಕುಂದಗೋಳಮಠ, ಪ್ರಭು ನವಲಗುಂದಮಠ ಹಾಗೂ ಪ್ರಮುಖರು ಉಪಸ್ಥಿತರಿದ್ದರು.