Tel: +91 0836 2251055
6 APRIL 2024
ಕುಂದಗೋಳ ವಿಧಾನಸಭಾ ಕ್ಷೇತ್ರದ ಗುಡಗೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದೆನು.
ಜಗತ್ತು 5G ಬಳಸುವ ಮಟ್ಟಿಗೆ ಬೆಳೆದಿದ್ದರೂ ಭಾರತದ ಬಹುತೇಕ ಹಳ್ಳಿಗಳಿಗೆ ಸರಿಯಾದ ವಿದ್ಯುತ್ ಪೂರೈಕೆ ಆಗುತ್ತಿರಲಿಲ್ಲ. ಹಾಗಾಗಿ ಪ್ರಧಾನಮಂತ್ರಿ ಶ್ರೀ Narendra Modi ಅವರು ಭಾರತದ ಮೂಲೆ ಮೂಲೆಗೂ ವಿದ್ಯುತ್ ತಲುಪಬೇಕೆಂದು ಶ್ರಮಿಸಿ, ಈಗ ಅದು ನನಸಾಗುವ ಸಮಯ ಬಂದಿದೆ. ಅದೂ ಪಿಎಂ ಸೂರ್ಯ ಘರ್ ಮುಫ್ತ್ ಬಿಜಲಿ ಯೋಜನೆಯಡಿ ನಮಗೆ ಹೇರಳವಾಗಿ ಲಭ್ಯವಿರುವ ಸೌರಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡುವುದಲ್ಲದೇ, ರೂಫ್ಟಾಪ್ ಸೋಲಾರ್ ಪ್ಯಾನಲ್ ಹಾಕಿಸಿಕೊಂಡವರಿಗೆ 300 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಮಹತ್ತರ ಯೋಜನೆ ಜಾರಿಗೊಳಿಸಿದೆ. ಇಂತಹ ಯೋಜನೆಗಳು, ಭಾರತೀಯರ ಹಾಗೂ ಭಾರತದ ಏಳಿಗೆಯ ಕಡೆ ಮೋದಿ ಸರ್ಕಾರದ ದಿಟ್ಟ ಹೆಜ್ಜೆಯಾಗಿದೆ. ಈ ಪರ್ವ ಮುಂದುವರೆಯಬೇಕು ಎಂದು ಕಾರ್ಯಕರ್ತರು ದನಿಗೂಡಿಸಿ, ಜಯಕಾರದ ಮೂಲಕ ಬಿಜೆಪಿಗೆ ತಮ್ಮ ಬೆಂಬಲವನ್ನು ಸೂಚಿಸಿದರು.
ಇಂದಿನ ಸಭೆಯಲ್ಲಿ ಶಾಸಕ ಮಿತ್ರರಾದ ಶ್ರೀ M R Patil , ಹಿರಿಯರಾದ ಡಿವೈ ಲಕ್ಕನಗೌಡ್ರ, ಗ್ರಾಮಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ದಾಕ್ಷಾಯಣಿ ಶಿರೂರು, ಉಪಾಧ್ಯಕ್ಷರಾದ ಶ್ರೀಮತಿ ನಿರ್ಮಲಾ ಬೂದಿಹಾಳ, ಮಂಡಲ ಅಧ್ಯಕ್ಷರಾದ ಶ್ರೀ ರವಿಗೌಡ್ರ ಪಾಟೀಲ, ಪ್ರಮುಖರು ಹಾಗೂ ಹಿರಿಯರು ಉಪಸ್ಥಿತರಿದ್ದರು.