Tel: +91 0836 2251055
30 APRIL 2024
ಇಂದು ಕುಂದಗೋಳ ವಿಧಾನಸಭಾ ಕ್ಷೇತ್ರದ ಕಳಸ, ಪಶುಪತಿಹಾಳ ಮತ್ತು ಯರೇಬೂದಿಹಾಳ ಗ್ರಾಮಗಳಲ್ಲಿ ನಡೆದ ಪ್ರಚಾರಾರ್ಥ ಸಭೆಗಳಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದೆನು. ಬಿಸಿಲ ಬೇಗೆಯಲ್ಲಿಯೂ ಮನೆಗೆ ನೀರು ತರಲು ದೂರ ನಡೆದು ಬಳಲುತ್ತಿದ್ದ ಧಾರವಾಡದ ಜನತೆಗೆ ಪ್ರಧಾನಮಂತ್ರಿ ಶ್ರೀ Narendra Modi ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ಜಲ್ ಜೀವನ್ ಮಿಷನ್ ನಿಂದಾಗಿ ಮನೆಗಳ ನಳದಲ್ಲೀಗ ನೀರು ಬರುತ್ತಿದ್ದು ನಿರಾಳವಾಗಿದೆ. ಇಂತಹ ಜನಪರ ಯೋಜನೆಗಳು ಮತ್ತಷ್ಟು ಭಾರತದಲ್ಲಿ ಜಾರಿಗೊಳ್ಳಲು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸೋಣವೆಂದು ಜನತೆ ನನ್ನೊಂದಿಗೆ ಸಂಕಲ್ಪ ಮಾಡಿದರು.
ಇಂದಿನ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ M R Patil , ಶ್ರೀ ದಾನಪ್ಪ ಗಂಗಾಯಿ, ಶ್ರೀಮತಿ ಶೀಲಾ ಶೇತ್ ಸನದಿ, ಶ್ರೀಮತಿ ನಿರ್ಮಲಾ ನಾಗಲಿಂಗನವರು, ಶ್ರೀ ರಾಘವೇಂದ್ರ ನಾಯಕ್, ಶ್ರೀ ಬಸವರಾಜ ಈಶ್ವರಪ್ಪ ಕಂದರಿ, ಶ್ರೀ ಮುತ್ತಣ್ಣ ಮುಡಿಮಲ್ನವರ, ಶ್ರೀ ಮಹದೇವಪ್ಪ ಪೂಜಾರ್, ಶ್ರೀ ಚಂದ್ರಪ್ಪ ಕರಡಿ, ಶ್ರೀ ದೇವಯ್ಯ ಲಕ್ಕನಗೌಡ್ರು, ಶ್ರೀ ಎನ್ ಎನ್ ಪಾಟೀಲ, ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.