Tel: +91 0836 2251055
18 APRIL 2024
ಇಂದು ಕುಂದಗೋಳ ವಿಧಾನಸಭಾ ಕ್ಷೇತ್ರದ ತರ್ಲಘಟ್ಟ, ಹಿರೇಹರಕುಣಿ, ಕಮಡೊಳ್ಳಿ, ಶಿರೂರ, ದೇವನೂರ, ಕುಬಿಹಾಳ ಮತ್ತು ಇಂಗಳಗಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದೆನು.
2014 ರಲ್ಲಿ ಶ್ರೀ Narendra Modi ಅವರು ಈ ದೇಶದ ಪ್ರಧಾನಿಯಾಗಿ ನಾಯಕತ್ವ ವಹಿಸಿದಾಗ ಭಾರತ 10 ದುರ್ಬಲ ರಾಷ್ಟ್ರಗಳಲ್ಲಿ ಒಂದಾಗಿತ್ತು. ಇದು ಅದರ ಹಿಂದಿನ ಹತ್ತು ವರ್ಷ ಕಾಂಗ್ರೆಸ್ ಆಡಳಿತದ ಸಾಧನೆ. ಇಂತಹ ದುರ್ದೈವದ ಸ್ಥಿತಿಯಿಂದ 9 ವರ್ಷಗಳಲ್ಲಿ ಭಾರತವನ್ನು ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕತೆಯಾಗಿ ಬೆಳೆಸಿದ್ದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಶ್ರಮ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ್ದು ಒಂದೇ ಧ್ಯೇಯ. ಭಾರತವನ್ನು ದುಃಸ್ಥಿತಿಯಿಂದ ವಿಶ್ವಗುರುವನ್ನಾಗಿಸಬೇಕು ಎಂದು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಡವರ ಕೈ ಬಿಡಬಾರದೆಂದು, ಸ್ವತಃ ಬಡಕುಟುಂಬದಿಂದ ಬಂದ ಪ್ರಧಾನಿಯವರು ಬಡ ಜನರ ಸಂಕಷ್ಟವನ್ನು ಚೆನ್ನಾಗಿ ಅರಿತಿದ್ದರಿಂದ, ಅವರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ಬಡವರನ್ನು ಮೇಲ್ದರ್ಜೆಗೆ ಏರಿಸಲು ಶ್ರಮಿಸಿದರು. ಈ 10 ವರ್ಷದಲ್ಲಿ ಕಂಡಿರುವುದು ಟ್ರೈಲರ್ ಅಷ್ಟೇ ಮುಂದಿನ 10 ವರ್ಷಗಳಲ್ಲಿ ಭಾರತದಲ್ಲಿ ಬಡತನ ಸಂಪೂರ್ಣ ನಿರ್ಮೂಲನೆ ಮಾಡಬೇಕೆಂಬುದು ಮೋದಿಯವರ ಸಂಕಲ್ಪವೂ ಹೌದು, ಅದಕ್ಕಾಗಿ ಅವರು ಭಾರೀ ಯೋಜನೆ ಹಾಕಿದ್ದಾರೆ. ಭಾರತದ ವಿಕಾಸಕ್ಕೆ ಮತ್ತೆ ಮೋದಿಯವರು ಪ್ರಧಾನಿಯಾಗಬೇಕಿದೆ. ಹಾಗಾಗಿ ಈ ಬಾರಿಯೂ ಬಿಜೆಪಿ ಬಹುಮತದಿಂದ ಗೆಲ್ಲಬೇಕಿದೆ.
ಈ ಸಂದರ್ಭದಲ್ಲಿ ಶಾಸಕರಾದ M R Patil ಆದಿಯಾಗಿ ಪಕ್ಷದ ಪ್ರಮುಖರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.