11 APRIL 2024

ಮತ್ತೊಮ್ಮೆ ಕಮಲ ಅರಳಿಸಲು ತಯಾರಾಗಿ ನಿಂತ ಕಲಘಟಗಿ ಜನತೆಗೆ ಹೃದಯಸ್ಪರ್ಶಿ ಧನ್ಯವಾದಗಳು.

ರಾಷ್ಟ್ರವನ್ನು ಸುಭದ್ರವಾಗಿ ಇಡುವುದರ ಜೊತೆಗೆ ಆರ್ಥಿಕವಾಗಿ ಸಶಕ್ತಗೊಳಿಸಿದ ಪ್ರಧಾನಮಂತ್ರಿ ಶ್ರೀ Narendra Modi ಅವರನ್ನು ಮೂರನೇ ಬಾರಿಗೆ ಗೆಲ್ಲಿಸುವ ಸಂಕಲ್ಪದೊಂದಿಗೆ, ಇಂದು ಕಲಘಟಗಿ ವಿಧಾನಸಭಾ ಕ್ಷೇತ್ರದ ಸೂರಶೆಟ್ಟಿಕೊಪ್ಪ ಮತ್ತು ನಾಗನೂರು ನಲ್ಲಿ ನಡೆದ ಪಕ್ಷದ ಪ್ರಚಾರಾರ್ಥ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆನು.

ದೇಶದ ಹಿತಕ್ಕಾಗಿ ಮತ್ತು ಜಿಲ್ಲೆಯ ಪ್ರಗತಿಗಾಗಿ ಬಿಜೆಪಿಯೊಂದೇ ಭರವಸೆ ಎಂಬುದನ್ನು ಜನತೆ ಅರ್ಥಮಾಡಿಕೊಂಡಿದ್ದು, ಪಕ್ಷದ ಪ್ರತಿಯೊಂದು ಸಭೆ ಕಾರ್ಯಕ್ರಮದಲ್ಲೂ ಜನರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪಕ್ಷಕ್ಕೆ ಬೆಂಬಲ ಸೂಚಿಸುತ್ತಿರುವುದು ಸಂತಸದ ಸುದ್ದಿ ಮತ್ತು ನಮಗೆ ಶ್ರೀರಕ್ಷೆ ಕೂಡ ಹೌದು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ Nagaraj Chebbi , ಜಿಲ್ಲಾಧ್ಯಕ್ಷರಾದ ಶ್ರೀ ನಿಂಗಪ್ಪ ಸುತಗಟ್ಟಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಶ್ರೀಮತಿ ಗೀತಾ ಮರಿಲಿಂಗಣ್ಣವರ್, ಪ್ರಮುಖರಾದ ಶ್ರೀ ಐ ಸಿ ಗೋಕುಲ, ಶ್ರೀ ಬಸವರಾಜ್, ಶ್ರೀ ಹನುಮಂತಗೌಡ್ರು, ಶ್ರೀ ಮಲ್ಲಿಕಾರ್ಜುನಗೌಡ ಪೊಲೀಸ್ಗೌಡ್ರ, ಶ್ರೀ ವಿರೂಪಾಕ್ಷೇಗೌಡ ಪಾಟೀಲ್, ಶ್ರೀ ಗಂಗಯ್ಯ ಹಿರೇಮಠ ಮತ್ತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: