Tel: +91 0836 2251055
13 APRIL 2024
ಕಲಘಟಗಿ ವಿಧಾನಸಭಾ ಕ್ಷೇತ್ರದ ಯರಿಕೊಪ್ಪ ಮತ್ತು ಕಣವಿ ಹೊನ್ನಾಪುರ ಗ್ರಾಮಗಳಲ್ಲಿ ನಡೆದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು.
ಕಳೆದ 10 ವರ್ಷದಲ್ಲಿ ಭಷ್ಟಾಚಾರ ಮುಕ್ತ ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಕೀರ್ತಿ Narendra Modi ಸರ್ಕಾರಕ್ಕೆ ಸಲ್ಲುತ್ತದೆ. ಸಮರ್ಥ ನಾಯಕತ್ವ, ದೂರದೃಷ್ಟಿಯ ಆಡಳಿತ ಮತ್ತು ಜನಪರ ಆಡಳಿತದ ಫಲವಾಗಿ ಭಾರತ ಇಂದು ಅತಿ ವೇಗದ ಅಭಿವೃದ್ಧಿಯನ್ನು ಕಾಣುತ್ತಿದೆ. ಈ 10 ವರ್ಷದ ಪ್ರಗತಿ ಕೇವಲ ಒಂದು ಸಣ್ಣ ತುಣುಕಷ್ಟೇ… ಮುಂದಿನ ಅವಧಿ ಭಾರತವನ್ನು ಮತ್ತೊಂದು ಅಭಿವೃದ್ಧಿಯ ಆಯಾಮಕ್ಕೆ ಮೋದಿಯವರ ನಾಯಕತ್ವ ಕೊಂಡೊಯ್ಯಲಿದೆ. ಹೀಗಾಗಿ ನಮ್ಮ ದೇಶದ ಉಜ್ಜ್ವಲ ಭವಿಷ್ಯಕ್ಕಾಗಿ, ದೇಶವಾಸಿಗಳ ಒಳಿತಿಗಾಗಿ ನಮ್ಮ ಆಯ್ಕೆ ಬಿಜೆಪಿಯೇ ಆಗಿರಲಿ.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ Nagaraj Chebbi , ಪ್ರಮುಖರಾದ ಶ್ರೀ ಕಲ್ಮೇಶ ಹಾವೇರಿಪೇಟಿ, ಶ್ರೀ ಯಲ್ಲಪ್ಪ ಹುಲೆಪ್ಪನವರ್, ಶ್ರೀ ಬಸವರಾಜ್ ಗುಂಡಗೋವಿ, ಶ್ರೀ ಶಂಕರಗೌಡ ಗೌಡರ, ಶ್ರೀ ಸಿದ್ದರಾಮಂಚ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.