28 March 2024

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಕಲಘಟಗಿ ಅಳ್ನಾವರ ಮತ ಕ್ಷೇತ್ರ- 75 ರಲ್ಲಿ ಹಿರೆಹೊನ್ನಳ್ಳಿ ಗ್ರಾಮದಲ್ಲಿ ಇಂದು ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದೆನು.

ಶ್ರೀ Narendra Modi ಅವರನ್ನು ಮೂರನೇ ಬಾರಿ ಪ್ರಧಾನಮಂತ್ರಿಯನ್ನಾಗಿ ಮಾಡಿ ಜಾಗತಿಕ ಮಟ್ಟದಲ್ಲಿ ಭಾರತವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಕಾರಣೀಕರ್ತರಾಗಲು ಮತ್ತೊಮ್ಮೆ ಜಿಲ್ಲೆಯಲ್ಲೂ ಬಿಜೆಪಿಯನ್ನು ಗೆಲ್ಲಿಸುವ ಸಂಕಲ್ಪ ಮಾಡಿರುವ ಜನತೆ ಇಂದು ಒಕ್ಕೊರಳಿನಿಂದ ಬಿಜೆಪಿಗೆ ಜೈಕಾರ ಹಾಕುವ ಮೂಲಕ ಬೆಂಬಲ ಸೂಚಿಸಿದರು. ಹಿರೆಹೊನ್ನಳ್ಳಿ ಗ್ರಾಮ ಪ್ರತಿ ಬಾರಿಯೂ ಭಾರತೀಯ ಜನತಾ ಪಕ್ಷಕ್ಕೆ ಅತಿ ಹೆಚ್ಚು ಮತ ನೀಡಿ ಬೆಂಬಲಿಸುತ್ತಾ ಬಂದಿದ್ದು, ಪ್ರತಿ ಚುನಾವಣೆಯಲ್ಲೂ ಕಮಲ ಪಡೆಗೆ ಬೆಂಬಲವಾಗಿ ನಿಂತಿರುವ ಗ್ರಾಮವಿದು. ಆದ್ದರಿಂದ ಈ ಗ್ರಾಮದಿಂದಲೇ ಇಂದು ಬಹಿರಂಗ ಪ್ರಚಾರ ಸಭೆ ಶುಭಾರಂಭಗೊಳಿಸಲಾಯಿತು.

ಇಂದಿನ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ನಿಂಗಪ್ಪ ಸುತಗಟ್ಟಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ S V Sankanur , ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ Nagaraj Chebbi , ಈರಣ್ಣ ಜಡಿ, ಪಂಚಾಯತ್ ಅಧ್ಯಕ್ಷರು, ಸರ್ವ ಸದಸ್ಯರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

#DharwadMPConstituency

#PhirEkBaarModiSarkar

#AbkiBaar400Paar

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: