Tel: +91 0836 2251055
5 MAY 2024
ಇದೇ ಮಂಗಳವಾರ, ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣಾರ್ಥ ಮತಯಾಚನೆಗಾಗಿ ಕಲಘಟಗಿಯಲ್ಲಿ ನಡೆಸಿದ ರೋಡ್ ಶೋ ದಲ್ಲಿ ಭಾಗವಹಿಸಿ ಕ್ಷೇತ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿದೆನು. 2014 ರಿಂದ ದೇಶದ ಹೆಚ್ಚಿದ ಗರಿಮೆ ನಮ್ಮೆಲ್ಲರಿಗೂ ಕಾಣುವಂತೆ ಇದೆ. ಇದೇ ಸಮಯದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಾದ ಅಪಾರ ಅಭಿವೃದ್ಧಿಯೂ ಕ್ಷೇತ್ರದ ಜನತೆಗೆ ಮನದಟ್ಟಾಗಿದೆ. ಭೋರ್ಗರೆವ ಅಲೆಯಂತೆ ನಮ್ಮ ಕ್ಷೇತ್ರದಲ್ಲಿ ಕೇಸರಿಯು ಆವರಿಸಿ ಬಿಜೆಪಿ ಗೆಲ್ಲಲಿದೆ ಎಂಬುದಕ್ಕೆ ಇಂದು ನೆರೆದಿದ್ದ ಜನತೆಯೇ ಸಾಕ್ಷಿ.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ Nagaraj Chebbi , ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ನಿಂಗಪ್ಪ ಸುತಗಟ್ಟಿ, ಪ್ರಮುಖರಾದ ಶ್ರೀ ಶಶಿಧರ ನಿಂಬಣ್ಣವರ, ಶ್ರೀ ಐ.ಸಿ. ಗೋಕುಲ, ಶ್ರೀ ಸೀತಪ್ಪ ಪಾಟೀಲ, ಶ್ರೀ ವೀರಣ್ಣ ಜಡಿ, ಶ್ರೀ ಬಸವರಾಜ ಕರಡಿಕೊಪ್ಪ, ಶ್ರೀ ಪುಟ್ಟಪ್ಪ ಕಲ್ಲಪ್ಪ ಪುಟ್ಟಪ್ಪನವರು, ಶ್ರೀ ಮಾಂತೇಶ್ ತಹಸಿಲ್ದಾರ, ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.