Tel: +91 0836 2251055
11 APRIL 2024
ಹುಬ್ಬಳ್ಳಿ ಎಸ್.ಎಸ್.ಕೆ ಸಮಾಜದಿಂದ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಸೂಚಿಸಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು.
ಸೋಮವಂಶದ ಸಹಸ್ರಾರ್ಜುನ ಕ್ಷತ್ರಿಯ ಸಮಾಜವು ಯಾವಾಗಲೂ ಮತ ಹಾಕಿರುವುದು ಭಾರತೀಯ ಜನತಾ ಪಕ್ಷಕ್ಕೇ. ಎಸ್.ಎಸ್.ಕೆ ಸಮಾಜ ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಶ್ರೀ Narendra Modi ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸುವುದಾಗಿ ಶಪಥ ಮಾಡಿದೆ. ಮೋದಿಯಂಥಹ ಒಬ್ಬ ನಾಯಕ ಕಾಂಗ್ರೆಸ್ ಪಾಳಯದಲ್ಲಿ ತೋರಿಸಿಬಿಟ್ಟರೆ ಒಪ್ಪುತ್ತೇವೆಂದು ಎಸ್.ಎಸ್.ಕೆ ಸಮಾಜದವರೇ ಆದ ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಭಾಂಡಗೆಯವರು ಅಭಿಪ್ರಾಯ ವ್ಯಕ್ತಪಡಿಸಿ, ಬಿಜೆಪಿಗೆ ಎಸ್.ಎಸ್.ಕೆ ಸಮಾಜದ ಸಂಪೂರ್ಣ ಬೆಂಬಲ ಸೂಚಿಸಿದರು.
ಚುನಾವಣೆಯಲ್ಲಿ 100% ಮತದಾನ ನಮ್ಮ ಕ್ಷೇತ್ರದಲ್ಲಾಗುವಂತೆ ನಾವು ಪ್ರಯತ್ನಿಸಬೇಕೆಂದು ಆಶಯ ವ್ಯಕ್ತಪಡಿಸಿದೆನು.
ಮೋದಿಯವರ ಆಡಳಿತದಲ್ಲಿ ಜಾಗತಿಕವಾಗಿ ಭಾರತದ ಗೌರವ ಹೆಚ್ಚಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಮೇಲುಗೈ ಸಾಧಿಸುತ್ತಾ ಸಾಗಿದ್ದು, ಮತ್ತೊಮ್ಮೆ ನಾವೆಲ್ಲರೂ ಸೇರಿ ಮೂರನೇ ಬಾರಿಗೆ ನರೇಂದ್ರ ಮೋದಿಯವರನ್ನು ಗೆಲ್ಲಿಸಲು ಸಿದ್ಧರಾಗಬೇಕಿದೆ.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣಸಾ ಭಾಂಡಗೆ, ಶಾಸಕರಾದ ಶ್ರೀ Arvind Bellad , ಶ್ರೀ Mahesh Tenginkai , ಶ್ರೀ M R Patil , ಜಿಲ್ಲಾಧ್ಯಕ್ಷರಾದ ಶ್ರೀ ತಿಪ್ಪಣ್ಣ ಮಜ್ಜಗಿ, ಮಾಜಿ ಶಾಸಕರು ಮತ್ತು ಎಸ್. ಎಸ್. ಕೆ ಸಮಾಜದ ಅಧ್ಯಕ್ಷರಾದ ಶ್ರೀ ಅಶೋಕ ಕಾಟವೆ ಹಾಗು ಸಮಾಜದ ಮುಖಂಡರು ಮತ್ತು ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.