ಪ್ರಧಾನಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆಯಡಿ ಹುಬ್ಬಳ್ಳಿ ಕಿಮ್ಸ್ ನಲ್ಲಿ ಬೃಹತ್ ಸುಸಜ್ಜಿತ ಹೊಸ ಆಸ್ಪತ್ರೆ ನಿರ್ಮಾಣ 150 ಕೋಟಿರೂ ವೆಚ್ಚದಲ್ಲಿ ಕಿಮ್ಸ್ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ.

• ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಈಗಿರುವ 50 ಹಾಸಿಗೆಗಳ ಸುಸಜ್ಜಿತ ಇಎಸ್‍ಐ ಆಸ್ಪತ್ರೆಯನ್ನುರೂ 30ಕೊಟಿ ವೆಚ್ಚದಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ.

• ಸಚಿವ ಪ್ರಲ್ಹಾದ ಜೋಶಿಯವರ ಸತತ ಪ್ರಯತ್ನ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಔಟ್ರಿಚ್ ಸೇವಾ ಕೇಂದ್ರ ಹುಬ್ಬಳ್ಳಿಯ ಕಿಮ್ಸ್‍ನಲ್ಲಿ ಪ್ರಾರಂಭಿಸಲಾಗಿದೆ.

• ನ್ಯಾಶನಲ್ ಹೆಲ್ತ್ ಮಿಶನ್‍ ಯೋಜನೆಯಡಿ ತಾಯಿ ಮತ್ತು ಮಗು ಆರೈಕೆ ಕೇಂದ್ರ 25 ಕೋಟಿರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ.
• ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್‍ ಇನ್ಫಾಸ್ಟ್ರಕ್ಚರ್ ಮಿಶನ್‍ ಯೋಜನೆಯಡಿಯಲ್ಲಿ ದೇಶದ 10 ರಾಜ್ಯಗಳಲ್ಲಿ ಜೈವಿಕ ಸುರಕ್ಷತಾ ಪ್ರಯೋಗಾಲಯ (ಲ್ಯಾಬ್)ಸ್ಥಾಪಿಸಲಾಗುತ್ತಿದ್ದು ಅದರಲ್ಲಿ ನಮ್ಮ ಕರ್ನಾಟಕದ ಧಾರವಾಡ ಕೂಡ ಒಂದಾಗಿದೆ. ಕೊರೊನಾದಂತಹ ಸೂಕ್ಷ್ಮಾಣು ಜೀವಿಗಳ ಅಧ್ಯನ ಹಾಗೂ ಅವುಗಳನ್ನು ತಡೆಗಟ್ಟುವ ಲಸಿಕೆಗಳ ತಯಾರಿಕೆಗೆ ಈ ಪ್ರಯೋಗಾಲಯ ಸಹಾಯವಾಗಲಿದೆ.

Tags: