ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು

ರಸ್ತೆಜಾಲ

 

ನಮ್ಮ ಶ್ರೀ ನರೇಂದ್ರ ಮೋದಿಜಿಯವರ ಸರ್ಕಾರದ 2014 ರಿಂದ 2021 ರವರೆಗಿನ ಅವಧಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ರಸ್ತೆಜಾಲ ನಿರ್ಮಾಣಕ್ಕೆ ಒಟ್ಟು 8,300 ಕೋಟಿರೂ. ಗಳ ಬೃಹತ್‍ ಅನುದಾನದಲ್ಲಿ ನಿರ್ಮಿಸಲಾದ ರಸ್ತೆಗಳನ್ನು ಲೋಕಾರ್ಪಣೆ ಮಾಡಿದ್ದು ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಲಿದೆ.

 

ಕೇಂದ್ರರಸ್ತೆ ನಿಧಿಯಡಿ (ಸಿಆರ್‍ಎಫ್) 616.52 ಕೋಟಿಯಲ್ಲಿ ರಸ್ತೆಗಳ ಅಭಿವೃದ್ಧಿ ಪ್ರಗತಿಯಲ್ಲಿವೆ.

ಈಗಾಗಲೇ 103 ಕಿಮಿ ರಸ್ತೆ ನಿರ್ಮಿಸಲಾಗಿದೆ.

 

  • ಪ್ರಧಾನಮಂತ್ರಿ ಗ್ರಾಮ ಸಡಕ್‍ ಯೋಜನೆ 1ರಡಿ 58.47 ಕಿಮಿ ರಸ್ತೆ ನಿರ್ಮಾಣ 
  • ಪ್ರಧಾನಮಂತ್ರಿ ಗ್ರಾಮ ಸಡಕ್‍ ಯೋಜನೆ 2ರಡಿ 163ಕಿಮಿ ರಸ್ತೆ ನಿರ್ಮಾಣ
  • ಪ್ರಧಾನಮಂತ್ರಿ ಗ್ರಾಮ ಸಡಕ್‍ ಯೋಜನೆ 3ರಡಿ 49.38 ಕೋಟಿ ವೆಚ್ಚದಲ್ಲಿ 91.49ಕಿಮಿ ರಸ್ತೆ ನಿರ್ಮಾಣ

 

 

ವಿಮಾನ ನಿಲ್ದಾಣ

 

ಹುಬ್ಬಳ್ಳಿಯಲ್ಲಿ ರೂ 160 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ದರ್ಜೆಯ ಸುಸಜ್ಜಿತ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದ್ದು ಈಗ ಹುಬ್ಬಳ್ಳಿಯ ವಿಮಾನ ನಿಲ್ದಾಣವು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಉಡಾನ್’ ಅಡಿ ದೇಶದ ಹಾಗೂ ರಾಜ್ಯದ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕಕಲ್ಪಿಸಲಾಗಿದೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣ 8 ಮೆಗಾ ವ್ಯಾಟ್ ಸೌರಶಕ್ತಿ ಆಧಾರಿತ ವಿದ್ಯುತ್‍ ಉತ್ಪಾದನಾ ಘಟಕ ಆರಂಭಿಸಿರುವುದರೊಂದಿಗೆ ಈಗ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿದೆ.

 

ರೈಲ್ವೆ

 

ನೈರುತ್ಯರೈಲ್ವೇ ವಲಯ

ಹೊಸ ರೈಲು ಮಾರ್ಗಗಳ ನಿರ್ಮಾಣ

2004-2014 ವರೆಗೆ 1,121 ಕಿ. ಮೀ.

2014-2022 ವರೆಗೆ 2,575 ಕಿ. ಮೀ.

 

ಜೋಡಿಮಾರ್ಗಗಳ ನಿರ್ಮಾಣ

2004-2014 ವರೆಗೆ 1,657 ಕಿ.ಮೀ

2014-2022 ವರೆಗೆ 1,881 ಕಿ.ಮೀ.

ರೈಲು ಮಾರ್ಗಗಳ ವಿದ್ಯುದ್ದೀಕರಣ

2004-2014 ವರೆಗೆ – 208 ಕಿ.ಮೀ.

2014-2022 ವರೆಗೆ – 1,245 ಕಿ.ಮೀ.

 

ರೈಲ್ವೇ ಮೇಲ್ಸೇತುವೆಗಳ ನಿರ್ಮಾಣ

2004-2014 ವರೆಗೆ – 474

2014-2022 ವರೆಗೆ – 1612

 

ರೈಲ್ವೇ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಮಾಡಿರುವ ಒಟ್ಟು ವೆಚ್ಚ

2004-2014 ವರೆಗೆ 8,913 ಕೋಟಿರೂ.

2014-2022 ವರೆಗೆ 32,753 ಕೋಟಿರೂ.

 

2022 ರ ಸಾಲಿನ ಬಜೆಟ್‍ನಲ್ಲಿ ನೈಋತ್ಯ ರೈಲ್ವೇಗೆ 6,900 ಕೋಟಿರೂ. ಅನುದಾನ ಬಿಡುಗಡೆಯಾಗಿದೆ.

ಇದರಲ್ಲಿ ಕರ್ನಾಟಕದ ಪಾಲಿಗೆ 6,000 ಕೋಟಿರೂ. ಸಿಗಲಿದೆ.

 

ಹುಬ್ಬಳ್ಳಿ ರೈಲು ನಿಲ್ದಾಣವನ್ನು 115 ಕೋಟಿರೂ. ಗಳ ವೆಚ್ಚದಲ್ಲಿ ವಿಶ್ವದರ್ಜೆಗೆ ಏರಿಸಲಾಗಿದೆ ಮತ್ತು ವಿಶ್ವದಅತೀಉದ್ದದ 1,505 ಮೀ. ರೈಲ್ವೇ ಪ್ಲಾಟ್ ಫಾರಂ ನಿರ್ಮಾಣಗೊಂಡಿದೆ.

 

ಧಾರವಾಡ ರೈಲು ನಿಲ್ದಾಣ 20 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ.

 

ಸ್ಮಾರ್ಟ್ ಸಿಟಿ

 

ಸ್ಮಾರ್ಟ ಸಿಟಿ ಯೋಜನೆ ಅಡಿ ನಮ್ಮ ಹುಬ್ಬಳ್ಳಿ ಧಾರವಾಡ ಮಹಾನಗರಕ್ಕೆಇದುವರೆಗೂ 621 ಕೋಟಿ ಹಣ ಬಿಡುಗಡೆಯಾಗಿದ್ದು, ಈ ಯೋಜನೆ ಅಡಿ ಒಟ್ಟು 64 ಕಾಮಗಾರಿಗಳನ್ನು ಕೈಗೊಂಡಿದ್ದು ಅದರಲ್ಲಿ 45 ಕಾಮಗಾರಿಗಳು ಪೂರ್ಣಗೊಂಡಿವೆ.

ಅಮೃತ ಯೋಜನೆಯಲ್ಲಿ 176 ಕೋಟಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

 

 

ಜಲಜೀವನ್ ಮಿಷನ್

 

ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಹಾಗೂ ರಾಜ್ಯ ಸರ್ಕಾರದ ಜಲಧಾರೆ ಯೋಜನೆಯಡಿ 1032 ಕೋಟಿರೂಪಾಯಿ ವೆಚ್ಚದಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಮಲಪ್ರಭಾ ನದಿಯಿಂದ ಕುಡಿಯುವ ನೀರು ಸರಬರಾಜು.

ಜಲ ಜೀವನ ಮಿಶನ್‍ ಧಾರವಾಡ

  • ಒಟ್ಟು ಜನ ವಸತಿ ಪ್ರದೇಶಗಳು – 388
  • ಒಟ್ಟು ಗ್ರಾಮಗಳು – 353
  • ಒಟ್ಟು ಮನೆಗಳು – 2.04 ಲಕ್ಷ
  • ಇದುವರೆಗೂ ಸಂಪರ್ಕ ಕಲ್ಪಿಸಿರುವ ಒಟ್ಟು ಮನೆಗಳು – 1.95 ಲಕ್ಷ (97%)
  • ಒಟ್ಟು ಮೊತ್ತರೂ. 334 ಕೋಟಿ

 

 

ಸ್ವಚ್ಛ ಭಾರತ ಮಿಶನ್

 

ನಮ್ಮ ಜಿಲ್ಲೆಯಲ್ಲಿ ಇದುವರೆಗೂ103.70ಕೋಟಿರೂ. ಗಳ ವೆಚ್ಚದಲ್ಲಿ1.13 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ನಮ್ಮ ಜಿಲ್ಲೆಯಲ್ಲಿ ಎಸ್.ಬಿ.ಎಮ್. ಯೋಜನೆಯಡಿ 37 ಅಂಗನವಾಡಿ ಕೇಂದ್ರಗಳಲ್ಲಿ ನೂತನ ಶೌಚಾಯಗಳನ್ನು ನಿರ್ಮಿಸಲಾಗಿದೆ. ಹಾಗೆಯೇ 168 ಅಂಗನವಾಡಿ ಕೇಂದ್ರಗಳಲ್ಲಿ ಇದ್ದಂತಹ ಶೌಚಾಲಯಗಳನ್ನು ಸಂಪೂರ್ಣ ದುರಸ್ತಿಗೊಳಿಸಲಾಗಿದೆ.

 

 

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ

 

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ನಮ್ಮ ಧಾರವಾಡ ಜಿಲ್ಲೆಯಲ್ಲಿ 8 ಸಾವಿರಕ್ಕೂ ಹೆಚ್ಚು ತಾಯಂದಿರಿಗೆ 5 ಸಾವಿರರೂ. ಸಹಾಯಧನ ನೀಡಲಾಗಿದೆ.

 

 

Rural Infrastructure Development Fund (RIDF)

•RIDF ನಿಧಿಯಡಿ ಧಾರವಾಡ ಲೋಕಸಭಾಕ್ಷೇತ್ರದ ವ್ಯಾಪ್ತಿಯಡಿಇದುವರೆಗೂ 446 ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ.

 

 

ಕೃಷಿ ಕ್ಷೇತ್ರ

 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ

ಅಕ್ಟೋಬರ್ 17ರಂದು12 ನೇ ಕಂತಿನ ಹಣ ಬಿಡುಗಡೆ. 

ಧಾರವಾಡಜಿಲ್ಲೆಯಲ್ಲ್ಲಿ 1.13 ಲಕ್ಷರೈತರ ಫಲಾನುಭವಿಗಳಿಗೆ 22.70ಕೋಟಿರೂ. ಬಿಡುಗಡೆ.

 

ಇದುವರೆಗೂ ಒಟ್ಟು ಈ ಯೋಜನೆಯಡಿ 378.೨೫ ಕೋಟಿರೂ. ನಮ್ಮಜಿಲ್ಲೆಗೆ ಬಿಡುಗಡೆಯಾಗಿದೆ.

 

ಬೆಳೆ ವಿಮೆ

 

ಧಾರವಾಡ ಜಿಲ್ಲೆಯಲ್ಲಿನ 2022 ರ ಮುಂಗಾರು ಹಂಗಾಮಿನ ಕೆಂಪು ಮೆಣಸಿನಕಾಯಿ ಬೆಳೆಯ ಮಧ್ಯಂತರ ಬೆಳೆ ನಷ್ಟ ವಿಮಾ ಪರಿಹಾರವಾಗಿ(Mid-season Adversity claim) 20.69 ಕೋಟಿ ಹಣ ನೇರವಾಗಿರೈತರಖಾತೆಗೆ ಬಿಡುಗಡೆಯಾಗಲಿದೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಧಾರವಾಡ ಜಿಲ್ಲೆಯ 2022 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತೀವೃಷ್ಠಿಯಿಂದ ಹಾನಿಗೀಡಾಗಿದ್ದ ಆಲೂಗಡ್ಡೆ, ಕೆಂಪು ಮೆಣಸಿನಕಾಯಿ, ಹತ್ತಿ, ಗೋವಿನಜೋಳ ಹಾಗೂ ಶೆಂಗಾ ಬೆಳೆದ ರೈತರಿಗೆ ಮಧ್ಯಂತರ ವಿಮಾ ಪರಿಹಾರವಾಗಿ 63,609 ರೈತರಿಗೆ 57 ಕೋಟಿರೂ. ಬಿಡುಗಡೆ ಮಾಡಲಾಗಿದೆ. 

ಧಾರವಾಡಜಿಲ್ಲೆಯಲ್ಲಿನ 2018-19 ರ ಪ್ರಧಾನಮಂತ್ರಿಫಸಲ್ ಬಿಮಾಯೋಜನೆಯ 1,939 ತಿರಸ್ಕøತ ಪ್ರಕರಣಗಳನ್ನು ಪನಃ ಪರಿಗಣಿಸಿ ಜಿಲ್ಲೆಗೆ 4.32 ಕೋಟಿರೂ. ಬಿಡುಗಡೆ ಮಾಡಲಾಗಿದೆ.