ಬಣ್ಣದರ್ಪಣೆ

"ಬಣ್ಣ ನಮ್ಮದು - ಸಮಯ ಮತ್ತು ಸೇವೆ ನಿಮ್ಮದು"

"ಬಣ್ಣದರ್ಪಣೆ" ಎಂಬ ವಿಶೇಷ ಅಭಿಯಾನದಡಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲಾ ಕಾಲೇಜುಗಳಿಗೆ ಜೀವ ತುಂಬುವ ನಿಟ್ಟಿನಲ್ಲಿ, ಬಣ್ಣ ಹಚ್ಚುವ ಸೇವಾ ಕಾರ್ಯ ನಡೆಯಲಿದೆ.‌

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಳೆಗುಂದಿರುವ ಸರ್ಕಾರಿ ಶಾಲಾ – ಕಾಲೇಜುಗಳ ಗೋಡೆಗಳಿಗೆ ಹೊಸ ಹೊಳಪು ತುಂಬಲು ಮುಂದಾಗಿದ್ದು, ನನ್ನ ಪರಿಕಲ್ಪನೆಯಲ್ಲಿ ರೂಪುಗೊಂಡಿರುವ ಈ ಕಾರ್ಯಕ್ರಮದಲ್ಲಿ ಒಂದು ವರ್ಷದ ವರೆಗೆ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ, ಬಣ್ಣದರ್ಪಣೆ ಅಭಿಯಾನ ಮುಂದುವರಿಯಲಿದೆ. ಪ್ರತಿ ತಿಂಗಳು 100 ಶಾಲೆಗಳಿಗೆ ಬಣ್ಣ ಹಚ್ಚುವ ಗುರಿ ಹೊಂದಲಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1127 ಸರ್ಕಾರಿ ಶಾಲಾ ಕಾಲೇಜುಗಳನ್ನ ಗುರುತಿಸಲಾಗಿದ್ದು, ವರ್ಷದೊಳಗೆ ಅವುಗಳನ್ನು ಬಣ್ಣದೊಂದಿಗೆ ಕಂಗೊಳಿಸುವಂತೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ. 

 

ನನ್ನ ಪೋಷಕತ್ವದ ಕ್ಷಮತಾ ಸೇವಾ ಸಂಸ್ಥೆಯ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಣ್ಣ ಹಚ್ಚುವ ಕಾರ್ಯಕ್ರಮ ಬಣ್ಣದರ್ಪಣೆ. ಕ್ಷಮತಾ ಸೇವಾ ಸಂಸ್ಥೆ ಉಚಿತವಾಗಿ ಬ‍ಣ್ಣವನ್ನು ಪೂರೈಸಲಿದೆ. ಸಂಘ ಸಂಸ್ಥೆಗಳು, ಸೇವಾ ಸಂಘಟನೆಗಳು, ಸ್ಥಳೀಯ ಜನಪ್ರತಿನಿಧಿಗಳು ಸ್ವಯಂ ಪ್ರೇರಣೆಯಿಂದ ಸೇವಾ ಭಾವದೊಂದಿಗೆ ಉಚಿತವಾಗಿ ಬಣ್ಣ ಪಡೆದು, ಸರ್ಕಾರಿ ಶಾಲಾ ಕಾಲೇಜುಗಳಿಗೆ ಹೊಸ ಬಣ್ಣ ನೀಡಬಹುದಾಗಿದೆ.

ಬಣ್ಣ ಹಚ್ಚುವವರು ಯಾರು? ಅಭಿಯಾನದಲ್ಲಿ ಭಾಗವಹಿಸುವವರು ಯಾರು? 

ಶಿಕ್ಷಕರು, ಎಸ್.ಡಿ.ಎಮ್.ಸಿ. ಸದಸ್ಯರು, ಶಾಲೆಯ ಹಳೆಯ ವಿಧ್ಯಾರ್ಥಿಗಳು, ಸ್ವಸಹಾಯ ಸಂಘಗಳು, ಸೇವಾ ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳು, ಯುವಕ ಮಂಡಳಿ ಮತ್ತು ಸಂಘ ಸಂಸ್ಥೆಗಳು, ದೇವಸ್ಥಾನ ಕಮಿಟಿಗಳು, ಭಜನಾ ಸಂಘಗಳು ಹಾಗೂ ಯಾವುದೇ ಆಸಕ್ತ ತಂಡಗಳು ಈ ಬಣ್ಣದರ್ಪಣೆ ಅಭಿಯಾನದ ಭಾಗವಾಗುವ ಮೂಲಕ ಸರ್ಕಾರಿ‌ ಶಾಲಾ-ಕಾಲೇಜುಗಳಿಗೆ ಹೊಸ ಬಣ್ಣ ಹಚ್ಚುವ ಸೇವೆಯಲ್ಲಿ ಪಾಲ್ಗೊಳ್ಳಬಹುದು.
ಸರಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ಜಗತ್ತನ್ನೇ ಆಳುತ್ತಾರೆ ಎಂಬ ಮಾತಿನಂತೆ, ಸರಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಯೇ ನಮ್ಮ ಧ್ಯೇಯ.

ಬಣ್ಣದರ್ಪಣೆ ಅಭಿಯಾನದ ಮೂಲಕ ಸರಕಾರಿ‌ ಶಾಲೆಗಳ ಏಳಿಗೆಗೆ ಮುನ್ನುಡಿ ಬರೆದಿದ್ದೇವೆ, ಇದನ್ನು ಮುಂದುವರಿಸಲು ಜನರ ಸಹಕಾರ ಮತ್ತು ಸಮಯ ಅಗತ್ಯವಾಗಿದೆ.

For Government Education Institutes only

Register here​

    Institute Type*

    Taluk*